ಮನ್ನಣೆಗಳು
ಶಾರದಾ ವಿ ಮೂರ್ತಿ ಅವರಿಗೆ ದೊರೆತ ಮನ್ನಣೆಗಳು
ಬಿ.ಎಂ.ಶ್ರೀ ಪ್ರತಿಷ್ಠಾನದ ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ,
ಲೇಖಕಿಯರ ಸಂಘದ ಉಮಾರಾವ್ ದತ್ತಿನಿಧಿ ಪ್ರಶಸ್ತಿ
“ಕವಿತೆ ಬರೆಯಲೆ ನಾನು” ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ೨೦೧೦-೧೧ ರಲ್ಲಿ ಏರ್ಪಡಿಸಿದ್ದ ಪುಸ್ತಕ ಸ್ಪರ್ಧೆಯಲ್ಲಿ ನೀಲಗಂಗಾ ದತ್ತಿ ಪ್ರಶಸ್ತಿ
“ಶೋಧ” ಕಥಾ ಸಂಕಲನಕ್ಕೆ ಮುಂಬೈನ ಜಗಜ್ಯೋತಿ ಕಲಾವೃಂದದ ಶ್ರೀಮತಿ ಸುಶೀಲಾ ಶೆಟ್ಟಿ ಸ್ಮಾರಕ -- ೨೦೧೨ರ ಕಥಾ ಪ್ರಶಸ್ತಿ
ಕರ್ನಾಟಕ ಸಾಹಿತ್ಯ ಅಕಾಡೆಮಿಯು “ಮೊಟ್ಟೆಯೊಡೆದ ಮರಿಗಳು” ಮಕ್ಕಳ ಕಥಾ ಸಂಕಲನವನ್ನು ಮಕ್ಕಳ ಸಾಹಿತ್ಯ ಪ್ರಕಾರದಲ್ಲಿ ೨೦೧೭ನೇ ವರ್ಷದ ಅತ್ಯುತ್ತಮ ಕೃತಿಯೆಂದು ಗುರುತಿಸಿ ಪುಸ್ತಕ ಬಹುಮಾನವನ್ನು ನೀಡಿದೆ
ಗ್ರಾಮ ಭಾರತಿ ಟ್ರಸ್ಟ್ ರಾಷ್ಟ್ರೋತ್ಥಾನ ಬಳಗ -- ಕಾರಣಗಿರಿ -- ಇವರು ೨೦೨೩ ರಲ್ಲಿ ಶಾರದಾ ವಿ ಮೂರ್ತಿಯವರ ಸಾಹಿತ್ಯಾವಲೋಕನವನ್ನು ನಡೆಸಿದರು. ಜೊತೆಗೇ, ಶಾರದಾರಿಗೆ ವಿಶ್ವಾಸ ಪೂರ್ವಕವಾಗಿ "ಮಲೆನಾಡಿನ ವನಸುಮ"ವೆಂಬ ನಾಮಾಂಕಿತವನ್ನು ನೀಡಿದರು.
ಹಾಗೆಯೇ :
ಕನ್ನಡ ಸಾಹಿತ್ಯ ಪರಿಷತ್ತು -- ಕುವೆಂಪು ನಗರ (BTM) ವಿಧಾನಸಭಾ ಕ್ಷೇತ್ರ. "ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ" ೨೦೧೩. "ಗೌರವ ಅಭಿನಂದನೆ"
ಸವಿನೆನಪಿನ ಸ್ಮರಣಿಕೆ: ಕನ್ನಡ ಸಾಹಿತ್ಯ ಪರಿಷತ್ತು -- ಕುವೆಂಪು ನಗರ (BTM) ವಿಧಾನಸಭಾ ಕ್ಷೇತ್ರ. "೨ನೇ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೪
ಸ್ಮರಣಿಕೆ: ಉತ್ತರ ಕನ್ನಡ ಜಿಲ್ಲೆ ಕರ್ನಾಟಕ ಪ್ರಾಂತ -- ಪ್ರಥಮ ಸಾಹಿತ್ಯ ಸಮ್ಮೇಳನ -- ೨೦೧೬
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ನಗರ ಜಿಲ್ಲಾ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ, ಮಹಿಳಾ ಸಾಹಿತ್ಯ ಸಮ್ಮೇಳನ, ೨೦೧೬ -- ಅಭಿಮಾನದಿಂದ ಗೌರವಪೂರ್ವಕವಾಗಿ ಸನ್ಮಾನ
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ಪ್ರಶಸ್ತಿ ಫಲಕ. ೧೮
ಸಂಗೀತ ಗಂಗಾ ಮಾನಿನಿ ಕಲಾಕೂಟ ೨೦೨೪ರಲ್ಲಿ ಆಯೋಜಿಸಿದ್ದ ೧೦ನೇ ಮಹಿಳಾ ಕಲಾವಿದರ ಸಮ್ಮೇಳನದಲ್ಲಿ ಕವನ ವಾಚನ, ಅಭಿನಂದನೆ
Comments
Post a Comment