ಲೇಖಕಿಯ ಬಗ್ಗೆ
ಶಾರದಾ ವಿ ಮೂರ್ತಿ ಅವರು ಕಾದಂಬರಿ, ಕಥೆ, ಕವನ, ನಾಟಕ, ಮಕ್ಕಳ ಸಾಹಿತ್ಯ, ಪ್ರಬಂಧ, ದೇಶಭಕ್ತಿ ಗೀತೆಗಳು, ಹೀಗೆ ಕನ್ನಡ ಸಾಹಿತ್ಯದ ಹಲವಾರು ಪ್ರಾಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ, ಮತ್ತು ಜನ ಮನ್ನಣೆಗೆ ಪಾತ್ರರಾಗಿದ್ದಾರೆ. ಗಹನವಾದ ವಿಷಯಗಳನ್ನು, ಹಾಗೆಯೇ ಜೀವನದ ಪಾಠಗಳನ್ನು, ಸರಳ ಭಾಷೆಯಲ್ಲಿಯೇ ಓದುಗರ ಮನ ಮುಟ್ಟಿಸುವ ಕಲೆಯನ್ನು ಹಾಸು ಹೊಕ್ಕಾಗಿ ಮೈಗೂಡಿಸಿಕೊಂಡಿದ್ದಾರೆ. ಜೀವನದ ಅನುಭವಗಳನ್ನೇ ಹೇರಳವಾಗಿ ಬಿತ್ತಿರುವುದರಿಂದ ಹಲವಾರು ಓದುಗರಿಗೆ ಕೃತಿಗಳು ತಮ್ಮ ಬಾಳಿಗೇ ಕನ್ನಡಿಯಿಟ್ಟಂತೆ ಭಾಸವಾಗುತ್ತದೆ. ಪ್ರಾಥಮಿಕ ತರಗತಿಯಲ್ಲಿದ್ದಾಗ ಶಾಲಾ ನಾಟಕ ರಚನೆಯಿಂದ ಪ್ರಾರಂಭವಾದ ಇವರ ಸಾಹಿತ್ಯ ಕೃಷಿಯು ಇನ್ನೂ ನಿರಂತರವಾಗಿ ಸಾಗುತ್ತಿದೆ.
ಈವರೆಗೆ ಪ್ರಕಟವಾದ ಇವರ ಪುಸ್ತಕಗಳು:
ಕಾದಂಬರಿಗಳು:
ಬೆಳ್ಳಿಚುಕ್ಕಿ
ಸ್ನೇಹಸೌರಭ
ಅರ್ಥ
ಆಯ್ಕೆ
ಅವರವರ ಭಾವಕ್ಕೆ
ಸೌಂದರ್ಯ (2005)
ಪರೀಕ್ಷೆ (2005)
ನಿರೀಕ್ಷೆ (2005)
ನಿರ್ಧಾರ (2005)
ಗೆಲುವು (2005)
ಆಂತರ್ಯ (2005)
ಅಸೀಮದೆಡೆಗೆ (2005)
ಮಿಡಿದ ಹೃದಯ (2005)
ನಂಟು (2006)
ಕಂದ ಕಣ್ಮಣಿಯೆ (2007)
ಸಾಫಲ್ಯ, ಬೆಳ್ಳಿಚುಕ್ಕಿ (2009)
ತಿರುವು (2009)
ಅನನ್ಯ (2010)
ನಂಟು, ಪ್ರೀತಿ ಸೌರಭ (2015)
ಸಂಗ್ರಹ ಬರಹಗಳು
ನಿವೇದಿತಾ
ಸರಸ್ವತಿ ತಾಯೀಜಿ
ಕಥಾ ಸಂಕಲನಗಳು:
ಮೌಲ್ಯ
ನಾಳೆ
ದಿಶ (2005)
ಹೊಂಬೆಳಕು (2006)
ಬಾಂಧವ್ಯ (2007)
ಶೋಧ (2013)
ಬೇರು (2017)
ಅನುಬಂಧ (2018)
ಮಕ್ಕಳ ಕಥಾ ಸಂಕಲನ :
ಅಮೃತ ಬಿಂದು (2013)
ಮಕರಂದ (2014)
ಮೊಟ್ಟೆಯೊಡೆದ ಮರಿಗಳು (2017)
ಕವನ ಸಂಕಲನ :
ಕವಿತೆ ಬರೆಯಲೆ ನಾನು (2010)
ಮಕ್ಕಳ ಕವನ ಸಂಕಲನ :
ಮಕ್ಕಳ ನಾಟಕ ಸಂಕಲನ:
ಉಳಿಸಿ ನಮ್ಮನು ಉಳಿಸಿ (2019)
ಪ್ರಬಂಧ ಸಂಕಲನ :
ವೈವಿಧ್ಯ (2008)
ಗೂಡು ಕಟ್ಟಿ ಬನ್ನಿ (2013)
ಸಮರಸದ ಹಾದಿಯಲಿ (2014)
ಓಲೆಯ ಸರಬರ (2017)
ಗೆಲ್ಲಬಲ್ಲೆವು ನಾವು (2019)
ಮೆಚ್ಚುಗೆಯ ಗುಂಗಿನಲಿ (2021)
ನಿನ್ನಾಟವೇ ಚಂದ (2023)
ನಾಟಕಗಳ ಸಂಕಲನ :
ಜೀವನ ಕಥೆ
ಮಾತಂಗಿ ಮಾಣಿಕ್ಯ – ಡಾ।। ವಿಜಯಲಕ್ಷ್ಮಿ ದೇಶಮಾನೆ ಅವರ ಜೀವನ ಕಥೆ (2022)
ಪ್ರವಾಸ ಕಥನ
ದೇವಬುವಿಯ ಪಯಣ (2022)
Comments
Post a Comment